ಸ್ಪೆಷಲ್ ಸ್ಟೋರಿ

BIG BOSS KANNADA: ಮಂಜು ಮಹಾರಾಜರ ಅಡ್ಡಾಕ್ಕೆ ಯುವರಾಣಿ ಮೋಕ್ಷಿತಾ ಎಂಟ್ರಿ..!

ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮಂಜು ಅವರು ರಾಜನಾಗಿದ್ದರು. ಈಗ ಇವರಿಗೆ ವಿರೋಧಿ ಬಣ ಒಂದು ಹುಟ್ಟಿಕೊಂಡಿದೆ. ಹೌದು, ಮೋಕ್ಷಿತಾ ಪೈ ಅವರು ಯುವರಾಣಿ ಆಗಿದ್ದಾರೆ.

 ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಮಂಜು ಅವರು ರಾಜನಾಗಿದ್ದರು. ಈಗ ಇವರಿಗೆ ವಿರೋಧಿ ಬಣ ಒಂದು ಹುಟ್ಟಿಕೊಂಡಿದೆ. ಹೌದು, ಮೋಕ್ಷಿತಾ ಪೈ ಅವರು ಯುವರಾಣಿ ಆಗಿದ್ದಾರೆ. ಸಾಮ್ರಾಜ್ಯಕ್ಕಾಗಿ ಇಬ್ಬರ ಮಧ್ಯೆ ಕಿತ್ತಾಟ ನಡೆದಿದೆ. ಇಡೀ ಮನೆ ಇಬ್ಭಾಗವಾಗಿದೆ..ಬಿಗ್ ಮನೆಯಲ್ಲಿ ಮಂಜು ಹಾಗೂ ಮೋಕ್ಷಿತಾ ಮಧ್ಯೆ ಈ ಮೊದಲು ಅಣ್ಣ ತಂಗಿ ಸಂಬಂಧ ಇತ್ತು, ಆದ್ರೆ ಕಾಲ ಕಳೆದಂತೆ ಇವರಿಬ್ಬರ ಮಧ್ಯೆ ಬಿರುಕು ಮೂಡಿ, ಅಣ್ಣ ತಂಗಿ ಸಂಬಂಧಕ್ಕೆ ತಿಲಾಂಜಲಿ ಇಟ್ಟಿದ್ರು..
ಈ ವಾರ ಉಗ್ರಂ ಮಂಜು ರಾಜನಾಗಿ ಮನೆಯಲ್ಲಿ ಮೆರೆದು ರಾಜನಂತೆಯೇ ವರ್ತಿಸಿದ ಮಂಜು ಎಲ್ಲರ ಗಮನ ಸೆಳೆದಿದ್ರು, ಇದಕ್ಕೆ ಕೌಂಟರ್ ಕೊಡೋದಕ್ಕೆ ಬಿಗ್ ಬಾಸ್ ಈ ವಾರದ ಕೊನೆ ಹಂತದಲ್ಲಿ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ, ಅದ್ರಲ್ಲಿ ಮಹಾರಾಜ ಮಂಜುವಿಗೆ ತಂಗಿ ಅಂದ್ರೆ ಯುವರಾಣಿಯಾಗಿ ಮೋಕ್ಷಿತಾ ಎಂಟ್ರಿ ಕೊಟ್ಟಿದ್ದಾರೆ, ಅಣ್ಣನಿಂದ ಮೋಸ ಹೋಗಿ ಮತ್ತೆ ಆಸ್ಥಾನಕ್ಕೆ ಬರಳಿ ಅಧಿಕಾರದ ಜಿದ್ದಾಜಿದ್ದಿಗೆ ಬಿದ್ದು ಎರಡು ಬಣಗಳಾಗಿ ಹೋರಾಡುವ ಟಾಸ್ಕ್ ಇದಾಗಿದೆ..
ಮೋಕ್ಷಿತಾ ಯುವರಾಣಿಯಾಗಿ ಕೆಲವು ನಿಯಮಗಳನ್ನು ಈ ಮನೆಯಲ್ಲಿ ಮಾಡಿರುತ್ತಾರೆ. ಆ ನಿಯಮಕ್ಕೆ ತಕ್ಕಂತೆ ಎಲ್ಲರೂ ನಡೆದುಕೊಳ್ಳಬೇಕು. ಆದರೆ ಗೌತಮಿ ಮಾತ್ರ ಫಾಲೋ ಮಾಡಲ್ಲ ಎಂದು ಹೇಳುತ್ತಾರೆ. ಸುರೇಶ್ ಅವರು ಆಟದ ನಿಯಮವನ್ನು ಹೇಳಿದರೂ ಸಹ ಗೌತಮಿ ಮಾತ್ರ ಇದಕ್ಕೆಲ್ಲ ಒಪ್ಪಿಕೊಂಡಿಲ್ಲ. ಯುವರಾಣಿ ಕಂಡಾಗೆಲ್ಲ ನೀವು ತಲೆ ಬಾಗಿ ನಮಸ್ಕಾರ ಮಾಡಬೇಕಂತೆ ಎಂದು ಸುರೇಶ್ ಅವರು ಹೇಳುತ್ತಾರೆ. ಆದರೆ ಗೌತಮಿ ಇಲ್ಲ ನಾನು ಹಾಗೆಲ್ಲ ತಲೆಬಾಗೋದಿಲ್ಲ. ಯಾವತ್ ನಾನು ಅವರಿಗೆ ತಲೆ ಬಾಗಿದೆನೋ, ಅವತ್ತು ನಾನು ಅವರು ಹೇಳಿದ್ದನ್ನು ಕೇಳಿದೆ ಎಂದಾಗುತ್ತೆ. ಆ ಕಾರಣಕ್ಕಾಗಿ ನಾನು ತಲೆ ಬಾಗೋದಿಲ್ಲ ಎಂದು ಹೇಳ್ತಾರೆ. ಒಟ್ನಲ್ಲಿ ಮಂಜು ಮತ್ತು ಮೋಕ್ಷಿತಾ ಹಾಗೂ ಗೌತಮಿ ಮಧ್ಯೆ ಇದ್ದ ಕಂದಕ ಈ ಟಾಸ್ಕ್ನಿಂದ ಮತ್ತಷ್ಟು ಹೆಚ್ಚಾಗಿರೋದಂತೂ ಸುಳ್ಳಲ್ಲಾ..